Description
ವೇಸ್ಟ್ ಬಾಕ್ಸ್ ಅಭಿಯಾನ…..
ನಿಮ್ಮ ಮುಂದೆ ರಸ್ತೆಯಲ್ಲಿ ಹೋಗುತ್ತಿರುವ ಕಾರಿಂದ ಕಿಟಕಿ ಸರಿಸಿ ರಸ್ತೆಗೆ ಚಾಕುಲೇಟ್, ಬಿಸ್ಕಿತ್ ಪೇಪರ್, ಬಾಳೆಹಣ್ಣಿನ ಸಿಪ್ಪೆ, ಗುಟ್ಕಾ ಪ್ಯಾಕೆಟ್ ನೀರಿನ, ಜ್ಯೂಸ್ ನ ಬಾಟಲ್ ಇಂತಹ ಕಸಗಳು ನಿತ್ಯ ರಸ್ತೆಗಳಿಗೆ ಬಂದು ಬೀಳುವುದು ನೋಡಿರುತ್ತೀರಿ ಅಲ್ವಾ… ಒಂದು ಚಿಕ್ಕ ಕಸ ಯಾರಿಗೇನು ಮಾಡೇತು ಎಂಬುದು ನಿಮ್ಮ ಲೆಕ್ಕಾಚಾರ ಆದರೆ ಅದು ತಪ್ಪು.. ಯಾಕೆಂದರೆ ಒಂದು ಅಂಕಿ ಅಂಶ ಗಳಂತೆ ಬೆಂಗಳೂರು ಒಂದರಲ್ಲೇ ಈರೀತಿ ರಸ್ತೆ ಸೇರುವ ಕಸ ಒಂದು ಟನ್ ಗೂ ಅಧಿಕ ಎಂದರೆ ನಂಬುತ್ತೀರಾ?… ಇದು ಸತ್ಯ ಬಹುತೇಕ ಇಂತಹ ಪ್ಲಾಸ್ಟಿಕ್ ಗಳು ರಸ್ತೆ ಬದಿಯ ದನ, ನಾಯಿ ಗಳ ಹೊಟ್ಟೆ ಸೇರುತ್ತಿದ್ದು, ಕೆಲವು ಪಕ್ಷಿ ಸಂಕುಲಗಳ ನಿರ್ನಾಮಕ್ಕೂ ಇವುಗಳ ಕೊಡುಗೆ ಅಪಾರ.
ಇದಕ್ಕಾಗಿಯೇ ಇಲ್ಲೊಂದು ವಿಶಿಷ್ಟ ಅಭಿಯಾನ ವನ್ನು ಹೋಂ ಡಾಕ್ಟರ್ ಫೌಂಡೇಶನ್(ರಿ.), ಉಡುಪಿ ಆಯೋಜಿಸಿದೆ..
ಏನಿದು ವೇಸ್ಟ್ ಬಾಕ್ಸ್ ಅಭಿಯಾನ?
ನಮ್ಮ ಕಾರ್, ಆಟೋ ರಿಕ್ಷಾ, ಜೀಪ್, ಬೈಕ್, ಟೆಂಪೋ, ಲೋರಿ, ಬಸ್ ಗಳಲ್ಲಿ ಒಂದು ಚಿಕ್ಕ, ವಿಶೇಷ ಡಿಸೈನ್ ನ ಬಟ್ಟೆಯ ಬ್ಯಾಗ್ ಒಂದನ್ನು ಇಟ್ಟು ಕೊಳ್ಳುವ ಮೂಲಕ ಈ ರೀತಿ ವಾಹನಗಳ ಕಿಟಿಕೀಯಿಂದ ಪರಿಸರಕ್ಕೆ ಹೋಗುವ ಕಸವನ್ನು ತಡೆಗಟ್ಟ ಬಹುದು.. ಹಾಗಾಗಿ ಒಂದು ವಿಶಿಷ್ಟ ವಾಗಿ ಡಿಸೈನ್ ಮಾಡಿದ ವೇಸ್ಟ್ ಬಾಕ್ಸ್ ಅನ್ನು ನಿಮಗಾಗಿ ನಾವು ಕೊಡುತ್ತೇವೆ…. ಇದೆ ವೇಸ್ಟ್ ಬಾಕ್ಸ್ ಅಭಿಯಾನ…..
ಇದರಿಂದ ಲಾಭ ಏನು?
1) ಪರಿಸರ ಕ್ಕೆ ಮಾರಕ ವಾದ ಕಸ ಪರಿಸರಕ್ಕೆ ಸೇರದೆ ನಮ್ಮ ಮನೆಯ ಕಸ ಕ್ಕೆ ಸೇರಲಿದೆ ಇದರಿಂದ ಪರಿಸರ ಸಂರಕ್ಷಣೆ ಯಾಗಲಿದೆ
2) ದನ, ನಾಯಿ, ಪಕ್ಷಿ ಸಂಕುಲಕ್ಕೆ ಮಾರಕ ವೆಂಸುವ ಚುಇಂಗ್ ಗಮ್, ಪ್ಲಾಸ್ಟಿಕ್, ಸೂಜಿ, ಗಾಜು ಇತ್ಯಾದಿ ರಸ್ತೆಗೆ ಎಸೆಯಲ್ಪಡುವುದು ನಿಲ್ಲುತ್ತದೆ..ಮೂಕ ಪ್ರಾಣಿ ಪಕ್ಷಿಗಳ ಬದುಕಿಗೆ ಇದೊಂದು ಅದ್ಭುತ ಕೊಡುಗೆ ಯಾಗಲಿದೆ 🙏
3) ಈ ವಿಶಿಷ್ಟ ಶೈಲಿಯ ಬಟ್ಟೆಯ ಬ್ಯಾಗ್ ಗಳು ಗುಡಿ ಕೈಗಾರಿಕೆ ಗಳನ್ನು ನೆಚ್ಚಿಕೊಂಡ ಒಂದಷ್ಟು ಹೆಂಗಸರು ಮನೆ ಇಂದ ತಯಾರಿಸುತ್ತಾರೆ ಅವರಿಗೆ ಜೀವನೋಪಾಯಕ್ಕೆ ಉತ್ತಮ ಮಾರ್ಗವಾಗಲಿದೆ 🙏
4) ನಿಮ್ಮ ಪ್ರತಿ ಚೀಲ ದ ಖರೀದಿ ಯಲ್ಲಿ ಒಂದಷ್ಟು
ಹಣ ಅಸಹಾಯಕರ ಚಿಕಿತ್ಸೆಗೆ /ಮನೆ ನಿರ್ಮಾಣ ಕ್ಕೆ/ ಶಿಕ್ಷಣಕ್ಕೆ ಹೋಂ ಡಾಕ್ಟರ್ ಫೌಂಡೇಶನ್ ಗೆ ನೇರವಾಗಲಿದೆ
5) ಇಷ್ಟೇ ಅಲ್ಲದೆ ರಸ್ತೆಗೆ ಕಸ ಎಸೆಯಬಾರದು ಎನ್ನುವ ಒಂದು ಜಾಗ್ರತಿ ಚಾಲಕರಲ್ಲಿ ಬೆಳೆಸುವಲ್ಲಿ ಇದು ಸಹಕಾರಿಯಾಗಲಿದೆ…
ಇನ್ನೇಕೆ ತಡ ಒಂದು ಬ್ಯಾಗ್ ಆರ್ಡರ್ ಮಾಡಿ ಬಿಡಿ… ಆರ್ಡರ್ ಗಾಗಿ ಆನ್ಲೈನ್ ಸ್ಟೋರ್ ನ ವ್ಯವಸ್ಥೆ ಮಾಡಿದ್ದೇವೆ ಇಲ್ಲಿ ಮಾಡಿದ ಆರ್ಡರ್ ನೇರವಾಗಿ ನಿಮ್ಮ ಮನೆಗೆ ಬ್ಯಾಗ್ ಗಳನ್ನು ಮುಟ್ಟಿಸುತ್ತದೆ….
Reviews
There are no reviews yet.